ಹಾಗೇ ಸುಮ್ಮನೆ....
ಕಾಣದ ತೀರದೆಡೆಗೆ ಮನಸ್ಸೆಂಬ
ನೌಕೆಯ ಪಯಣ..
ಕಾತುರವು ಅವಸರವು ನಿನ್ನ
ಸೇರುವ ತವಕ..
ನಿದಿರೆ ಬರದಂತೆ ರಿಂಗಣಿಸಿದೆ
ಎದೆಯಂಗಳದಿ ನಿನ್ನ ಸ್ವರ..
ಉಸಿರೇ ವಾದ ಮಂಡಿಸುತ್ತಿದೆ
ನನ್ನನೂ ಮೀರಿ ನಿನ್ನ ಪರ..
ತಿಳಿಯದಾದಂತಿದೆ ಏನೋ ಪ್ರಮಾದ..
ಬಗೆಹರಿಸು ನೀ ಬಂದು ಈ ವಿವಾದ..😇
ಆ ಕಣ್ ರೆಪ್ಪೆ ಕಾಡಿಗೆಯ ಇಳಿಜಾರಿನಲಿ
ಕಾಲ್ಜಾರಿ ಬಿದ್ದ ನಾನೊಬ್ಬ ಪ್ರೇಮಜಂತು
ಮುಂಗುರುಳ ಕುಣಿಕೆಯಲಿ,
ನಡು ಕೆನ್ನೆ ಗುಳಿಯಲ್ಲಿ,
ನಾ ಸಿಲುಕಿದಂತೆ ಪ್ರೀತಿ ಶುರುವಾಯ್ತು..
ಒಮ್ಮೆ ನೀ ಬಳಿ ಬಂದು "ಹು..." ಎಂದರೆ..
ನಿನ್ನ ಜಗಕೆ ಮರುಕ್ಷಣದಿ ನಾನೇ ದೊರೆ..😇
ಮನದ ಹೊಸ ಪುಟಗಳ ವಾರಿಧಿಯಲಿ
ವಿಸ್ತರಿಸು ನಿನ್ನ ನೆನಪುಗಳ ವಸಾಹತು
ಮೂಗುತಿಯ ಮುತ್ತಲ್ಲಿ,
ತುಟಿಯಂಚ ಮತ್ತಲ್ಲಿ,
ಬಿತ್ತರಿಸಿ ಒಲವಿನ ಜಾಹೀರಾತು..
ಬಹುಶಃ ಬದಲಾದಂತಿದೆ ಧರೆ..
ಕಂಡ ಕ್ಷಣದಿಂದ ನೀನೆಂಬ ಅಪ್ಸರೆ...
ರಫ಼ಿ ರಿಪ್ಪನ್ ಪೇಟೆ
No comments: