Header Ads

Breaking News
recent

ವಿಧವೆ......

ಎತ್ತ ಕಡೆ ಹೋದರು ದಾಟಲಾಗುತ್ತಿಲ್ಲ
ನನ್ನ ಸುತ್ತಾಡುವ ಈ ನಡುಗತ್ತಲನ್ನು..
ಎಲ್ಲ ಆಗು ಹೋಗುಗಳನ್ನ ಇವನು ಬೆನ್ನಿಂಗಂಟಿಸೇ ಕಳಿಸಿಕೊಟ್ಟಿರಬೇಕು ಭೂಮಿಯ ಮೇಲೆ ನನ್ನನ್ನು..
ಹೆಜ್ಜೆ ಕಿತ್ತಿಡಬೇಕು ಅನ್ನುತ್ತಿರುವಾಗಲೇ
ಬೆಳಕಾಗಿದ್ದ ಕಾಲುಂಗರಗಳನ್ನ ಕಿತ್ತುಕೊಂಡಿದ್ದಾನೆ.
ಅವನ ನಿಯಮವೇ ಹೀಗೆ ವಿಧವೆ ಅನ್ನೋ ಪಟ್ಟ
ಹೆಣ್ಣಿಗೆ ಹೊರೆತು ಗಂಡಿಗಲ್ಲ ಅಂತ ಮತ್ತೆ ಮತ್ತೆ ಸಾರುತ್ತಿದ್ದಾನೆ....

ನಾ ಕಂಡ ಕನಸುಗಳು ಕಾಮನಬಿಲ್ಲಂತಿದ್ದವು
ಮೂಡುತ್ತಿದ್ದ ಭಾವನೆಗಳು ಹಕ್ಕಿಯಂತೆ ಹಾರುತ್ತಿದ್ದವು
ಮನಸ್ಸಿನ ಮಾತುಗಳು ಈಗೀಗ ಅರಳಲು ಮುಂದಾಗಿದ್ದವು.
ಆದರೆ ಎಲ್ಲವೂ ಈ ದಟ್ಟ ಭಯಬರಿತ ಬಯಲಲ್ಲಿ 
ಗಾಳಿಯಿದ್ದರೂ ಉಸೀರಾಡಲು ಅಂಜುತ್ತಿವೆ
ಕಾರಣ ಅವನುಡಿಸಿದ ಈ ಬಿಳಿಯ ಸೀರೆ...

ಅವನಿಚ್ಚೆಯಂತೆ ಇವನ ಬಾಂಧವ್ಯದ ಮಾಂಗಲ್ಯಕ್ಕೆ
ನಾನು ಮನಸಾರೆ ಕೊರಳೋಡ್ಡಿದೆ.
ಅವನೊಂದಿಗೆ ಮುಂದಿನ ಬದುಕೆನ್ನಲ್ಲ ಜೊತೆಯಾಗಿ
ಹಾಕಿದ ಏಳು ಹೆಜ್ಜೆಗಳಲ್ಲಿ ಅರಿತುಕೊಂಡಿದ್ದೆ.
ಎಲ್ಲ ಬಯಕೆಗಳನ್ನ ಅವನ ಕಿರುಬೆರಳಲ್ಲಿ ಬೆಸೆದಿದ್ದೆ.
ಆದರೆ ಇಂದು ಇವೆಲ್ಲ ನನ್ನ ಹಣೆಯ ಮೇಲೆ ಅವನಿಟ್ಟ
ಸಿಂಧೂರ ಬಿಂದು ಕಾಣದೆ ಕಣ್ಣೀರಿಡುತ್ತಿವೆ ಮೂಲೆ ಹಿಡಿದು..

ಅವನು ಜಗವ ಕಾಯೋ ದೇವರು,
ಇವನು ಮಾಂಗಲ್ಯ ಕಟ್ಟಿದ ದೇವರು 
ಈ ಇಬ್ಬರು ಕಾಣದೆ ಇದ್ದಿದ್ದಕೆ ನನ್ನೊಡನೆಯಿದ್ದವರೆ
ಕೈ ಬಳೆಯನ್ನ ಒಡೆದು ಮಾಡಿದ್ದಾರೆ ಚೂರು ಚೂರು.
ಆದರೂ ಧೈರ್ಯ ಮಾಡಿ ಹೆಜ್ಜೆ ಇಡಲು ಮುಂದಾದೆ 
ಅದೇ ಕ್ಷಣ ಅವನೇ ಸೃಷ್ಟಿಸಿದ ಜಗದೊಳಗೆ ಹದ್ದಿನಂತ
ಕಣ್ಣಿನವರನ್ನ ಕಂಡು ಮತ್ತೆ ಕಣ್ಣೀರಿಡುತ್ತಾ ಹೊಸ್ತಿಲೊಳಗೆ ಕಾಲಿಟ್ಟು ನನಗೆ ನಾನೇ ಬಂಧಿಯಾದೆ...

ಬೇಡ ಸೃಷ್ಟಿಕರ್ತನೆ ನೀ ಬರವಸೆಯ ಬೆಳಕೆಂದು
ಭಾವಿಸುವ ಜೀವಗಳಿಗೆ ಬದುಕಿನ ಅರ್ಧ ದಿನವಾದರೂ
ಧಯಪಾಲಿಸುವ ಮನಸ್ಸು ಮಾಡು.
ನಿನ್ನನ್ನು ಬೇಡುವುದಷ್ಟೆ ಧೂಸಿಸುವ ಶಕ್ತಿ ನಮಗಿಲ್ಲ
ಇಷ್ಟೆಲ್ಲ ನೀ ಮಾಡುತ್ತಲೇ ಇರುವೆ.ಆದರೂ ನಾವು
ನಿನ್ನನ್ನ ಪ್ರತಿದಿನ ಪೂಜಿಸುತ್ತಲೆ ಇರುವೆವು..
ಅದಕ್ಕಾದರೂ ನಮ್ಮ ಬದುಕಿನ ಬರವೆಸೆಗೆ ಬೆಳಕಾಗಲು
ಒಮ್ಮೆ ಧರೆಗಿಳಿದು ನೀ ಬಂದು ಬಿಡು ದೈವವೆ...

🖋🖋 ರಫ಼ಿ ರಿಪ್ಪನ್ ಪೇಟೆ

No comments:

Powered by Blogger.