#ಅಬಲೆ_ಅಫ್ಘಾನಿ_ನಾನು!!
#ಅಬಲೆ_ಅಫ್ಘಾನಿ_ನಾನು!!
ನಾನು ಅಫ್ಘಾನಿ...
ತಾಯಿ ಭಾರತೀಯ ಸೋದರಿ
ಹಿಂದೂಸ್ಥಾನ ನನ್ನ ತವರು ನಂಬಿರಿ
ಅದೊಂದು ಕಾಲವಿತ್ತು
ನಾವೆಲ್ಲಾ ಜೊತೆಗಿದ್ದೆವು
ವಸುದೈವ ಕುಟುಂಬವಾಗಿ
ನೆಮ್ಮದಿಯಾಗಿದ್ದೆವು
ಸಿಂಧು ನನ್ನ ಎದೆಯ ಮೇಲೆ
ಹರಿದು ತಂಪಾಗಿಸಿದ್ದಳು ತನುವನು
ಬುದ್ಧನು ಸ್ಪರ್ಶಿದಿದ್ದ ನನ್ನ ಹೃದಯವನು
ಕಾನಿಷ್ಕ ಆಳಿದ್ದ ನನ್ನನು
ಕಾಲದ ಏಟಿನಿಂದ ಬದುಕುಳಿದರೂ
ಕಟುಕರ ಡೈನಾಮೇಟಿಗೆ ಮುಕ್ಕಾದರೂ
ಅಳಿದುಳಿದ ಮಾನವ ಕ್ರೌರ್ಯದ ಕುರುಹುಗಳಾಗಿ
ಇನ್ನೂ ಉಳಿದಿವೆ ನನ್ನ ದೇಹದ ಎಲ್ಲೆಡೆಯಲ್ಲಿ
ಎಂದಿಗೂ ಮಾಯದ ಗಾಯಗಳಾಗಿ
ಅಮಾನವಿಯತೆಯ ದಾರುಣ ಕಥೆಗಳಾಗಿ
ನಾ ಎಂದು ನಿಮ್ಮಿಂದ ಬೇರೆಯಾದೆನೋ
ಒಂದು ಧರ್ಮದ ಅಧೀನಳಾದೆನೋ
ಧರ್ಮಾಂಧರ ಕೈಸೆರೆಯಾದೆನೋ
ಪಾಪಿಗಳಿಗೆ ಆಸರೆಯಾದೆನೋ
ನನಗೇ ತಿಳಿಯಲಿಲ್ಲ!
ನಾ ಹೊತ್ತ ಮಕ್ಕಳು ನನ್ನ ಕಣ್ಣ ಮುಂದೆಯೆ
ಉಗ್ರರ ಮದ್ದು ಗುಂಡುಗಳಿಗೆ
ದಿನಂಪ್ರತಿ ಬಲಿಯಾಗುವಾಗ
ನಾನು ಬಂಜರು ಭೂಮಿಯಾಗಿ ಉಳಿಯಬಾರದಿತ್ತೆ ಎಂದು ಅನಿಸುವುದಂತೂ ನಿಜ ಈಗ
ಅಂದೊಮ್ಮೆ....
ಒಸಾಮಾ ಬಿನ್ ಲಾಡೆನ್ ಎಂಬ
ನರರೂಪದ ಅಸುರ ನನ್ನನ್ನು
ಇನ್ನಿಲ್ಲದಂತೆ ಕಬಳಿಸಿಬಿಟ್ಟಿದ್ದ
ಎಲ್ಲರಿಗೂ ತನ್ನ ಧರ್ಮದ ಆಫೀಮನು ಉಣಿಸಿ
ಜಗತ್ತಿನ ದೃಷ್ಟಿಯಲ್ಲಿ ನನ್ನನ್ನು ವೇಶ್ಯೆಯಾಗಿಸಿಬಿಟ್ಟಿದ್ದ
ತುಂಬಾ ಕಿರುಕುಳ ಕೊಟ್ಟ ಅಳಿಸಿ
ಜಗದ 'ಅ' ದೊಡ್ಡಣ್ಣ
ತನ್ನ ಸೇಡು ತೀರಿಸಿಕೊಳ್ಳಲು ಬಂದವ
ಲಾಡೆನ್ ನ ಕೊಂದು ಹಾಕಿದ
ತಾಲಿಬಾನಿಗಳ ಹುಟ್ಟಡಗಿಸಿದ
ನನಗೆ ಹೊಸ ಬದುಕನು ಪ್ರಾಸಾದಿಸಿದ
ಭವಿಷ್ಯದ ಬೆಳಕು ಕಾಣಿಸಿದ
ನನ್ನ ಮಕ್ಕಳ ಮನಗಳಲ್ಲಿ
ಕನಸುಗಳ ಬೀಜಗಳ ಬಿತ್ತಿದ
ಸ್ವಾತಂತ್ರ್ಯದ ರುಚಿ ಹತ್ತಿಸಿದ
ನನ್ನ ಪಾಲಿಗೆ ಅಪದ್ಬಾಂಧವನಾಗಿ ಇದ್ದ
ಇರುವಷ್ಟು ದಿವಸ....
ಬಿಟ್ಟು ಹೊರಟಿದ್ದೆ ತಡ
ಮತ್ತೆ ಕತ್ತಲಾವರಿಸಿತಲ್ಲ!
ಎನ್ನ ಜಗದ ಅಣ್ಣ, ಅಕ್ಕಗಳಿರಾ..
ತಂದೆ ತಾಯಿಗಳಿರಾ..
ನಾ ನಿಮ್ಮ ಒಡಹುಟ್ಟಿದವಳು
ಕೈಬಿಡಬೇಡಿ ನನ್ನನು
ನನ್ನ ರಕ್ಷಣೆಗೆ ಯಾರಾದರು ಬರುವಿರೇನು?
ಅಬಲೆ ಅಫ್ಘಾನಿ ನಾನು!
◼️ ರಫ಼ಿ ರಿಪ್ಪನ್ ಪೇಟೆ
No comments: