ಗೆಳೆಯರೇ ಬದುಕು ಬೇವು-ಬೆಲ್ಲದಂತೆ.....
ಗೆಳೆಯರೇ ಬದುಕು ಬೇವು-ಬೆಲ್ಲದಂತೆ
ಗೆಲುವಿಗೆ ಹಿಗ್ಗದೇ, ಸೋಲಿಗೆ ಕುಗ್ಗದೆ
ಬಾಳ ಪಯಣದಿ ಗುರಿಯಿಟ್ಟು ನಡೆಯೋಣ
ಹರಗುರುವಿಗೆ ಕರವ ಜೋಡಿಸೋಣ...
ನೋವು ನಲಿವಲ್ಲಿ,ಅಳು ನಗುವಲ್ಲಿ ಸದಾ ಸನಿಹವಿರುವ ಆತ್ಮಬಂಧು ಇರುವಾಗ ಇಲ್ಲದಿರುವಾಗ ನಗು-ನಗುತ್ತಾ ನೆಂಟನಂತೆ ಬಂದು ಆಗುವನು ಸ್ಫೂರ್ತಿ ಸಿಂಧು... ಶಾರದೆಯ ಸನ್ನಿಧಿಯಲ್ಲಿ ಸಂಪ್ರೀತಿಯಿಂದ ಕೂಡಿ ಕಲಿತು ಸವಿ ಸ್ನೇಹದಿ ಬೆರೆತು ಆಡಿ ನಲಿದ ದಿನಗಳು ಮನದಲ್ಲಿ ಮಾಸದು ನೆನಪು ನೀಗದು,ಚಿರಕಾಲ ಉಳಿಯುವದು....ಪ್ರೀತಿ ನೀತಿಯ ಅಲೆ ಮೇಲೆ ತೇಲಿ ಸ್ನೇಹ ಸಾಗರದಿ ಕೈ ಸೋಲದೇ ಈಜಿ ತೀರ ಸೇರುವಲ್ಲೇ ನಗುವ ಗೆಲುವು ಅದುವೇ ಅಕ್ಕರೆಯ ಒಲುವು.ನಿನ್ನೆ ನಮ್ಮದಲ್ಲ,ಇಂದು ನಮ್ಮಗೆಲ್ಲ ನಾಳೆಯ ನಿರೀಕ್ಷೆಯಲ್ಲಿ ನಾವುಗಳೆಲ್ಲ ವಿನಯದ ವಿದ್ಯಾರ್ಥಿಗಳೇ ನಿಮ್ಮ ಭವಿಷ್ಯವೆಲ್ಲ ಉಜ್ವಲವಾಗಿ ಪ್ರಜ್ವಲಿಸಿ ಮೂಡಲಿ ಹೊಸ ಬೆಳಕೆಲ್ಲ...
No comments: