ಪ್ರಕೃತಿಯ ಪರಾಕ್ರಮ......
ಪ್ರಕೃತಿಯ ಪರಾಕ್ರಮ
—————————————
ನದಿಯಲ್ಲವೋ ಇದು ನನ್ನ ಹೊಲವು
ಕುದಿಯುತಿದೆ ಮನದೊಳಗೆ ರಕುತವು
ಬದುಕೆಲ್ಲ ಬರಿದಾಯ್ತು ರಣಮಳೆಗೆ
ನಿದುರೆಯ ಬರದಾಯ್ತು ಕಣ್ಣೆವೆಗಳಿಗೆ||
ಕನಸೆಲ್ಲ ಕೊಚ್ಚಿ ಕೊನೆಯಾಯ್ತು ಬಾಳ್ಗೇ
ದನಕರುಗಳ ಬದುಕು ನುಚ್ಚು ನೂರಾಯ್ತು
ವನರೋಧನೆಯಾಯ್ತು ನಮ್ಮಯ ಜನಕೆ
ಇನಿತಿಲ್ಲ ಬದುಕುವ ಆಸರೆಯ ಸವಲತ್ತು||
ಉಳಿದಿಲ್ಲ ಏನೊಂದು ನೀರಿನ ರಭಸಕ್ಕೆ
ಮಳೆಯಲ್ಲಿ ಮನೆ ಮಠವು ಹರಿದೋದವೀಗ
ಛಲದೊಡನೆ ಈಜುವೆನು ಪ್ರಕೃತಿಯ ಜೊತೆಗೆ
ಬಲವಿಲ್ಲದ ತನುವಿನೊಡಗೂಡಿ ಸಾಗುಲಿನ್ಹೇಗೆ||
ಮಾನವನ ಕೃತ್ಯಕ್ಕೆ ಪ್ರಕೃತಿಯು ಮುನಿದು
ಬಾನು ಭೂಮಿಗಳೆರಡು ಸ್ವಾಹಮಾಡುತಲಿಹವು
ಜಾಣತನ ತೋರುತಿಹ ತಂತ್ರಜ್ಞಾನಕೆ ಒಲಿದು
ಮಾಣಿಸಲಹುದೆ ಪಂಚಭೂತಗಳ ಪರಾಕ್ರಮವ||
No comments: