Header Ads

Breaking News
recent

ಶಾಲಾ ಬಸ್ ಚಾಲಕನೊಂದಿಗೆ 8ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ | ಎತ್ತ ಸಾಗುತ್ತಿದೆ ಸಮಾಜ - ಪ್ರಸ್ತುತ ಸಮಾಜದಲ್ಲಿ ಪೋಷಕರ ಜವಾಬ್ದಾರಿಗಳೇನು..???17

ಶಾಲಾ ಬಸ್ ಚಾಲಕನೊಂದಿಗೆ 8ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ 

ಪೋಷಕರ ಆತಂಕಕ್ಕೆ ಕಾರಣವಾಗಿರುವ ಈ ಘಟನೆ ನಡೆದಿರುವುದು ದೂರದ ಪಾಶ್ಚಾತ್ಯ ರಾಷ್ಟ್ರದಲ್ಲಲ್ಲ,ಇಂತಹ ಕಳವಳಕಾರಿ ಘಟನೆ ನಡೆದಿರುವುದು ನಮ್ಮ ಅಪ್ಪಟ ಮಲೆನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ..

ತನಗಿಂತಲೂ ಮೂರು ಪಟ್ಟು ಹೆಚ್ಚು ವಯಸ್ಸಿನ  ಶಾಲಾ ಬಸ್ ಚಾಲಕನ ಪ್ರೇಮದಾಟಕ್ಕೆ 8ನೇ ತರಗತಿ ವಿದ್ಯಾರ್ಥಿನಿ ಬಲಿಯಾಗಿದ್ದಾಳೆ. ತಾನು ಓದುತಿದ್ದ ಶಾಲೆಯ ಬಸ್ ಚಾಲಕ ಸಂತೋಷ್ ಎಂಬಾತ ಪ್ರೀತಿಸುವಂತೆ ಪೀಡಿಸುತ್ತಿದ್ದ ,ಬಸ್ ಡ್ರೈವರ್ ನೀಡುತ್ತಿದ್ದ ಕಿರುಕುಳದ ಬಗ್ಗೆ ವಿದ್ಯಾರ್ಥಿನಿ ಪೋಷಕರು ಶಾಲಾ ಆಡಳಿತ ಮಂಡಳಿ ಗಮನಕ್ಕೆ ತಂದಿದ್ದರು ಯಾರೂ ಏನೂ ಕ್ರಮ ಕೈಗೊಂಡಿರಲಿಲ್ಲ.

ಭಾನುವಾರ ವಿದ್ಯಾರ್ಥಿನಿ ರಾತ್ರಿ ಸ್ನೇಹಿತೆಯರ ಜೊತೆ ಹೊಸ ವರ್ಷದ ಪಾರ್ಟಿಗೆ ಹೋಗುವುದಾಗಿ ಮನೆಯಲ್ಲಿ ತಿಳಿಸಿ ತೆರಳಿದ್ದಳು. ಈ ವೇಳೆ ಸಂತೋಷ್ ವಿದ್ಯಾರ್ಥಿನಿಯನ್ನು ಕರೆದೊಯ್ದು ಮಧ್ಯರಾತ್ರಿ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ನಿಜವಾಗಿಯೂ ಇದು ಆತಂಕಕಾರಿ ಘಟನೆಯಾಗಿದ್ದು ನಮ್ಮ ಸಮಾಜ ಎತ್ತ ಸಾಗುತ್ತಿದೆ ಎಂಬ ಆತಂಕವಾಗುತ್ತಿದೆ

ಮಕ್ಕಳನ್ನು ಬೆಳೆಸುವುದು ಖಂಡಿತವಾಗಿಯೂ ಸಣ್ಣ ಕೆಲಸವಲ್ಲ. ಅದರಲ್ಲೂ ಪೋಷಕರು ಹೆಣ್ಣು ಮಕ್ಕಳನ್ನು ಬಹಳ ಜಾಗರೂಕತೆಯಿಂದ ನೋಡಿಕೊಳ್ಳುತ್ತಾರೆ. ನಿಮ್ಮ ಮಗಳಿಗೆ ಬಾಲ್ಯದಿಂದಲೇ ಕೆಲವು ವಿಷಯಗಳನ್ನು ಕಲಿಸಬೇಕು. ಮುಖ್ಯವಾಗಿ ಈ ಶಿಕ್ಷಣವು ಬೇರೆ ಎಲ್ಲೂ ಹೇಳಿಕೊಡುವುದಿಲ್ಲ,ಬದಲಾಗಿ ಮನೆಯಲ್ಲಿ ಪೋಷಕರೇ ಹೇಳಿಕೊಡಬೇಕು. ಸುಮಾರು 10 ವರ್ಷ ಕಳೆದ ನಂತರ, ಅವಳು ಅನೇಕ ವಿಷಯಗಳನ್ನು ತಿಳಿದುಕೊಳ್ಳಲು ಪ್ರಾರಂಭಿಸುತ್ತಾಳೆ.

ಪರಿಚಿತರೇ ಅನೇಕ ದಾರುಣ ಚಟುವಟಿಕೆಗಳಿಗೆ ಕಾರಣವಾಗುತ್ತಿರುವ ಕಾರಣ ಯಾರನ್ನೂ ನಂಬದಿರಲು ಸಲಹೆ ನೀಡಿ. ಇತ್ತೀಚಿನ ದಿನಗಳಲ್ಲಿ ಅನೇಕ ಘಟನೆಗಳು ನಡೆಯುವುದನ್ನು ನಾವು ಕೇಳುತ್ತೇವೆ. ಹಾಗಾಗಿ ಹೆಣ್ಣು ಮಕ್ಕಳಿಗೆ 10 ವರ್ಷ ವಯಸ್ಸಿನಿಂದಲೇ ಹೇಗೆ ವರ್ತಿಸಬೇಕು ಎಂಬುದನ್ನು ಕಲಿಸಿ. ಏಕೆಂದರೆ ಈ ವಯಸ್ಸಿನಲ್ಲಿ ಅವಳು ವಿಭಿನ್ನ ಸ್ನೇಹಿತರನ್ನು ಹೊಂದಲು ಪ್ರಾರಂಭಿಸುತ್ತಾಳೆ.ಹಾಗಾಗಿ ಯಾವುದೇ ವ್ಯಕ್ತಿಯನ್ನು ಕುರುಡಾಗಿ ನಂಬದಿರಲು ಆಗಾಗ್ಗೆ ಸಲಹೆ ನೀಡಿ. ಯಾವುದೇ ವಿಷಯವನ್ನು ಮುಚ್ಚುಮರೆಯಿಲ್ಲದೆ ಹೇಳಲು ಕೇಳಿಕೊಳ್ಳಿ.

ಹುಡುಗಿಯು, ಗಂಡು ಅಥವಾ ಹೆಣ್ಣು ಯಾರೇ ಆಗಿರಲಿ ಸ್ನೇಹಿತರನ್ನಾಗಿ ಮಾಡಿಕೊಳ್ಳುವ ಮುಂಚೆ ಜಾಗರೂಕತೆಯಿಂದ ಆಯ್ಕೆ ಮಾಡಿಕೊಳ್ಳಲು ಹೇಳಿ.

10 ವರ್ಷ ದಾಟಿದ ನಂತರ ಹುಡುಗಿಯರು ಬೇರೆ ಬೇರೆ ವಿಷಯಗಳತ್ತ ಆಕರ್ಷಿತರಾಗುವುದು ಸಹಜ. ಈ ಬಗ್ಗೆ ಪೋಷಕರಿಗೆ ಅರಿವು ಇರಬೇಕು. ಹಾಗಾಗಿ ಅವಳ ಸ್ನೇಹಿತರ ಆಯ್ಕೆಗೆ ಗಮನ ಕೊಡಿ. ಹುಡುಗಿ ತಾನು ಆರಿಸಿಕೊಳ್ಳುವ ಸ್ನೇಹಿತರ ಬಗ್ಗೆ ಜಾಗರೂಕರಾಗಿರಬೇಕು. ತನ್ನ ಜೀವನದಲ್ಲಿ ಯಾವುದೇ ತಪ್ಪು ವ್ಯಕ್ತಿಯನ್ನು ಪ್ರವೇಶಿಸಲು ಅನುವು ಮಾಡಿಕೊಡಬಾರದು ಎಂಬ ಸಾಮಾನ್ಯ ಕಲ್ಪನೆಯನ್ನು ಆಕೆಗೆ ಕಲಿಸಬೇಕು.

ಕೆಲವು ಶಾಲೆಗಳಲ್ಲಿ ಒಳ್ಳೆಯ ಹಾಗು ಕೆಟ್ಟ ಸ್ಪರ್ಶದ ಭಾವನೆಯನ್ನು ಹೇಳಿಕೊಟ್ಟರೆ, ಇನ್ನು ಕೆಲವು ಶಾಲೆಗಳಲ್ಲಿ ಇದನ್ನು ಕಲಿಸುವುದಿಲ್ಲ. ಶಾಲೆಯಲ್ಲಿ ಕಲಿಯಲಿ ಎಂದು ನೀವು ನಿರ್ಲಕ್ಷಿಸದಿರಿ.

ನಿಮ್ಮ ಮಕ್ಕಳು ಓದುವ ಶಾಲೆ ಅಥವಾ ಕಾಲೇಜಿನಲ್ಲಿ ಕಾರ್ಯ ನಿರ್ವಹಿಸುವ ಎಲ್ಲಾ ಉದ್ಯೋಗಿಗಳ ಬಗ್ಗೆ ನಿಮಗೆ ಮಾಹಿತಿ ಇರಲಿ ಯಾವ ಸಣ್ಣ ವಿಷಯವನ್ನು ನಿರ್ಲಕ್ಷಿಸಬೇಡಿ........

ಆತಂಕದಿಂದ......

🔵ರಫ಼ಿ ರಿಪ್ಪನ್‌ಪೇಟೆ

No comments:

Powered by Blogger.