ಕ್ಷಮಿಸಿ ಬಿಡು ಕಂದ.....
ಕ್ಷಮಿಸಿ ಬಿಡು ಕಂದಾ........
ಮೊಗ್ಗಲ್ಲೆ ನಿನ್ನ ಚಿವುಟಿಬಿಟ್ಟರಲ್ಲ.
ತಿಂಗಳೊಳು ಉಸಿರ ನಿಲ್ಲಿಸಿಹರಲ್ಲ.
ಕಣ್ಣಿರು ಹರಿದಿಹುದು ನಾ ನೆಂಟನಲ್ಲ.
ನನ್ನುಸಿರ ನೀಡಲೂ ನೀನೀಗ ಇಲ್ಲ.
ನಿನ್ನೊಳಗೆ ಹೊಕ್ಕ ಹುಳವನ್ನು ದೂಷಿಸಲೆ?
ಹುಳವನ್ನು ಹೆತ್ತು ದೂಡಿದವರ ದ್ವೇಷಿಸಲೆ?
ಸತ್ತು ನಿಂತಿಹರು ರಾಜ್ಯದಾ ರಾಜರು
ಆರ್ಥಿಕತೆಯೇ ಹೆಚ್ಚಾಯ್ತು ಜೀವದಾ ಎದುರು
ನಿನ್ನ ಶಾಪವೂ ಶಪಿಸದೇ ಬಿಡದಿವರ.
ಬದುಕಿದ್ದರೆ ಬಿಡೆವಮ್ಮ ನಾವಿವರ ಕುಣಿಯಲು😡
ಚಿರನಿದ್ರೆಗೆ ಜಾರಿದ ಓ ತಿಂಗಳ ಕಂದಮ್ಮ!
ಜೊಗುಳವ ಯಾರಾಡುತಿಹರಲ್ಲಿ ನೀನಿಂದು ಮಲಗಲು😥
ಏನೆಂದು ಬರೆಯಲೇ ಓ ಪುಟ್ಟ ಕಂದ!
ಜೋ ಜೋ ಜೋ!! ಜೋ ಜೋ ಜೋ!!
.........ರಫ಼ಿ.....ರಿಪ್ಪನ್ ಪೇಟೆ
No comments: