ಕೊರೋನಾ ........
ಓ ರೋಗಿಯೆ
ನನ್ನೆದೆಬಡಿತವೇ
ನಿನಗೆ ಲಾಲಿ
ಮಲಗೆನ್ನೊಡವೆಯೇ
ನನ್ನ ನಾಡಿ
ನಾನ್ಹಾಡದ ಗೀತೆ
ನನ್ನೆದೆಯ
ಬಡಿತದ ಭಾವಗೀತೆ
ಬದುಕು ನಿನ್ನದೇ
ಸಾವು ನಿನ್ನದೇ...
ಒಣಗುವ ಕಾಂಡ
ಅದರಲುರಿವ ಉರಿಯೂ
ನಿನ್ನದೇ ಕೆಂಡವೇ ನಿನ್ನೊಲವು
ನೆರೆಗೂದಲು
ತುಂಬಿದ ಕಾಯವ
ತೊರೆವ ವರೆಗೂ...
ಮಲಗಿರು ಪರಿವು ಅರಿವಿರದೇ..
ಗುಣವಾದ ಮೇಲೆ
ಶಪಿಸಿದ ದುರ್ದೈವದ
ಕೊರೋನಾಗೇನು ಗೊತ್ತು
ನಾ ಹೇಗೆ ಬದುಕುತಿರುವೆನೆಂದು..
ನನ್ನೀ ಬದುಕು ನಿನ್ನದೇ....
ನನ್ನೀ ನಾಶವು ನಿನ್ನದೇ.....
ರಫ಼ಿ ರಿಪ್ಪನ್ ಪೇಟೆ
No comments: