Header Ads

Breaking News
recent

ಕೋರೋನಾ ನಿನಗೆ ನಮಸ್ಕಾರ....

ಕೋರೊನಾ ನಿನಗೆ ನಮಸ್ಕಾರ...
ಬಾರದಿವರಿಗೆ ಸಂಸ್ಕಾರ.....

ನಮ್ಮ ಮಸೀದಿ, ಮಂದಿರ, ಚರ್ಚು-
ಸಂಘ,ಸಂಘಟನೆ, ಗುಂಪು
ಎಲ್ಲವೂ ಛಿದ್ರ ಛಿದ್ರ.
ನಾವೇ ಕಟ್ಟಿಕೊಟ್ಟ ಮನೆಗೆ
ದೇವರು ಚಿಲಕ ಹಾಕಿಕೊಂಡಿದ್ದಾನೆ.
ನೀನು ದೂರಿದವರ ರಕ್ತ ನಿನ್ನಲ್ಲಿ ಹರಿಯುತ್ತಿದೆ..
ನೀನು ಹೇಸಿದವರು ನಿನಗೆ ಚಿಲಕ ತೆಗೆದು ಸ್ವಾಗತಿಸಿದ್ದಾರೆ...

ಎಲ್ಲಾ ಕೆಂಪು ರಕ್ತಗಳೇ......ಇಲ್ಲಿ.....
ಅಲ್ಲೆಲ್ಲೋ ಶವಗಳು ಮುಕ್ತಿಗೆ ಹೊರಟವು...
ಚರ್ಮಗಳು ಮುದ್ದಾಡಿದವು....
ಆದರೂ ಚರ್ಮ ಕರಕಲಾಗದು ,,,,,
ಅದೂ ಕೆಂಪು ರಕ್ತವಲ್ಲ......
ತಂಪು ರಕ್ತ.....
ಜೀವಕಂತೂ ಬೆಲೆ ಇಲ್ಲಾ ನಿನ್ನಲ್ಲಿ.....
ಶವಕ್ಕೆ ಆದರೂ.......

ಕೊರೋನಾ ನಿನಗೆ ನಮಸ್ಕಾರ..
ನಿನಗಿಲ್ಲಾ ಮಮಕಾರ....

ಮನುಷ್ಯ ರೂಪದಲ್ಲಿ ಇರೋ ಕೊರೋನಾ 
ನಿನಗೂ ಇಲ್ಲವೇ😡😡😡😡


ರಫ಼ಿ ರಿಪ್ಪನ್ ಪೇಟೆ

No comments:

Powered by Blogger.