ಅಪ್ಪ..........
ತುತ್ತನು ತಿನಿಸುವಳು ಅಮ್ಮ
ತುತ್ತಿಗೆ ತೊತ್ತಾಗಿ ತೆವಳುವ ಅಪ್ಪ
ಹಾಲನಿತ್ತಳು ಕುಡಿಯಲು ಅಮ್ಮ
ಅದರೊಳಡಗಿದ ತುಪ್ಪದಂತೆ ನನ್ನಪ್ಪ
ಬಿಸಿಲಾದರೆ ಸೆರಗ ಹೊದಿಸುವಳು ಅಮ್ಮ
ತಾನೇ ಮರವಾಗಿ ನಿಲ್ಲುವ ಅಪ್ಪ
ಮಳೆಗೆ ಕೊಡೆ ಹಿಡಿವಳು ಅಮ್ಮ
ತಾನೇ ಕೊಡೆಯಾಗುವ ಅಪ್ಪ
ಅಪ್ಪನೆಂದರೆ ಪ್ರೀತಿ
ಎದುರು ನಿಲ್ಲದಾ ಭೀತಿ
ಶಿಸ್ತಿನ ಸರದಾರ, ಸ್ವಾಬಿಮಾನಿ
ದುಡಿವ ಕೈಗೆ
ಸೋಲೆಯಿಲ್ಲ ,ಗುರಿಯಷ್ಟೇ
ಮನೆಯ ಹಸಿರು..
ಜ್ವರವು ನನ್ನ ಕಾಡಿದಾಗ
ಅಮ್ಮನ ತುತ್ತಿಗಿಂತ
ಬೇಕಾದ್ದು ಅಪ್ಪನ ಹೆಗಲು
ನೀವೊಲಿದಾಗ ಅಂಗಡಿಯ
ಆಟಿಕೆಗಳೆಲ್ಲ ನನದೆ
ಕಾಲ್ಕೆಳಗೆ ಜಗವು
ಸಿಕ್ಕರೆ ನಿಮ್ಮಯಾ ಮಡಿಲು
ಅಪ್ಪ ನಿನ್ನ ದಯೆಯು ಹೀಗೆಯೇ
ಇರಲಿ ಎಂದು
ನಾನೆಷ್ಟು ಬೆಳೆದರು
ಮಗನೇ ಆಗಿರಲಿ ಎಂದೂ..
ಅದೆಕೋ ನಾನು ಅಪ್ಪನಾದಾಗ
ನನ್ನಪ್ಪ ಮೌನವಾದರು
ತನ್ನ ನೋವ ಅರಿವರೆಂದು...
ಹುಚ್ಚು ಅಪ್ಪಗೆ
ಬಿಗುಮಾನಬೇರೆ,
ಮನೆಯಕಟ್ಟಿ
ಮಕ್ಕಳ ದಡಸೇರಿಸಿದರೂ
ಮನಕೆ ಶಾಂತಿ ಬಾರದು
ಅರಿಯದಾದೆ ಅದೆಂಥ
ಹೋರಾಟವೋ ನನ್ನಪ್ಪನದು
ತನ್ನೊಡನೇ ಕಾಣದ ಗುದ್ದಾಟವೊ...
ರಫ಼ಿ ರಿಪ್ಪನ್ ಪೇಟೆ.....
No comments: