ಪೊರೆವ ತಂದೆಯು ಜೀವನ ಕಲಿಸುವ - father teaches life
ಪೊರೆವ ತಂದೆಯು ಜೀವನ ಕಲಿಸುವ
ಗತ್ತು ತೋರುವ ನಟನೆ ಕಾಣೋ
ಹೊತ್ತು ತಿರುಗುವ ಮನವ ಕಾಣೋ
ಬೆವರ ಹನಿಗಳು ಹರಿದರು ಕಾಣದಂಗೆ ಇರುವ
ಹದ್ದುಬಸ್ತಲಿ ಶಾಸ್ತಿ ಮಾಡುವ
ತನ್ನೊಳಗೆ ತಾನು ಅಳುವ ಬಿಕ್ಕಿ ಬಿಕ್ಕಿ
ಉಣಿಸುವನು ಊಟವನು ಆಗ್ರಹವನಿಕ್ಕಿ
ತಪ್ಪು ತಿದ್ದಿ ನಡೆವ ಕಂದನೆಡೆಗೆ ಪ್ರೀತಿ ತೋರುವ
ಗೆದ್ದ ಕಂದನ ಹಿರಿಮೆ ಹರಡುವ
ಸೋತರೆನಿತು ಬಿಡದೇ ಪಟ್ಟು
ಸೂಕ್ತದೆಡೆಗೆ ಎಳೆದು ಜುಟ್ಟು
ಜಗದ ಪರಿಯಲಿ ಬದುಕೊ ಬಗೆಯನ್ನು ತೋರುವ
ಜಗದಷ್ಟು ಪ್ರೀತಿಯ ಮನದಲ್ಲಿ ಅದುಮಿ
ಸೈನಿಕನಂತೆ ಶಿಸ್ತನ್ನು ಕಲಿಸಿ
ತನ್ನ ಜೀವನವನ್ನೆ ಮುಡಿಪು ಇಟ್ಟು ಬೆಳೆಸಿ
ಬೆಳೆದ ನಂತರ ಅಪರಿಚಿತನಂತಾಗುವ..... ಅಪ್ಪ
✒ರಫ಼ಿ ರಿಪ್ಪನ್‌ಪೇಟೆ
No comments: