ಜಿಜ್ಞಾಸೆ
ನಮ್ಮಲ್ಲಿ ಶತಮಾನಗಳಷ್ಟು ಹಿಂದೆಯೇ ಶೈವರು ವೈಷ್ಣವರ ನಡುವೇ ಯುದ್ಧ ನಡೆದಿತ್ತು. ತಪ್ಪಿಸಲು ಶಿವನು ಬರಲಿಲ್ಲ, ವಿಷ್ಣುವು ಬರಲಿಲ್ಲ.
ಕ್ರಿಶ್ಚಿಯನ್ ರಾಷ್ಟ್ರಗಳ ನಡುವೆ ಜಾಗತಿಕ ಯುದ್ಧಗಳು ಬಹಳಷ್ಟು ಬಾರಿ ನಡೆದವು. ಶಾಂತಿಯ ಮಂತ್ರ ಪಠಿಸಲು ಕ್ರಿಸ್ತನು ಬರಲಿಲ್ಲ, ಬುದ್ಧನು ಬರಲಿಲ್ಲ.
ಮುಸ್ಲಿಮರ ಒಳಪಂಗಡಗಳ ನಡುವೆ ಮತ್ತೆ ಮತ್ತೇ ಕಾಳಗ ನಡೆಯುತ್ತಿದೆ. ಆಮಾಯಕರ ಜೀವ ಉಳಿಸಲು ಅಲ್ಲಾಹ್ ಸಹ ಬರಲಿಲ್ಲ.
ಹೀಗಾಗಿ ಧರ್ಮ ಎನ್ನುವ ಅಫೀಮನ್ನು ತಲೆಗೆ ಏರಿಸಿಕೊಳ್ಳದೆ ನಮ್ಮ ಬುದ್ಧಿಯನ್ನು ನೆಟ್ಟಗೆ ಇಟ್ಟುಕೊಂಡು ಬದುಕಬೇಕು. ಧಾರ್ಮಿಕ ನಂಬಿಕೆಗಳು ಸುಖ ಶಾಂತಿ ನೆಮ್ಮದಿಯಿಂದ ಬದುಕಲು ನಮಗೆ ಕಾರಣಗಳನ್ನು ನೀಡಬೇಕು. ನಮ್ಮೆಲ್ಲರದು ಕಿರು ಪ್ರವಾಸದಂತಹ ಸಣ್ಣ ಬದುಕು.
ಈ ಅಲ್ಪಕಾಲದ ಬದುಕಿನಲ್ಲಿ ಕಾಲನ ಕುದುರೆ ಓಡುವ ವೇಗದ ನಡುವೆ ಕೆಲವರಿಗೆ ದ್ವೇಷದ ವಿಷ ಕಾರಲು ಹೇಗೆ ಸಮಯ ಸಿಗುತ್ತದೆ ಎನ್ನುವುದು ನನ್ನನ್ನು ಸದಾ ಕಾಡುವ ಪ್ರಶ್ನೆ.
ರಫ಼ಿ ರಿಪ್ಪನ್ ಪೇಟೆ
No comments: