ಪರ ಧರ್ಮ ಸ್ನೇಹ....
ಟೋಪಿ ಹಾಕಿ ಗಡ್ಡ
ಬಿಟ್ಟವರೆಲ್ಲ
ಉಗ್ರಗಾಮಿಗಳಲ್ಲ !!
ಹಣೆಗೆ ನಾಮ ಹಾಕಿ
ಕಾವಿ ಶಾಲು ಹಾಕಿದವರೆಲ್ಲ
ಕೋಮುವಾದಿಗಳಲ್ಲ !!
ಮುಸ್ಲಿಮ್ ಎನ್ನುವವರೆಲ್ಲ
ಮುಸ್ಲಿಮ್ಗಳಲ್ಲ !!
ಹಿoದು ಎನ್ನುವವರೆಲ್ಲ
ಹಿoದುಗಳಲ್ಲ !!
ಮುಸ್ಲಿಮ್
ನಾಮವೊoದುದಿದ್ದರೆ
ಮುಸ್ಲಿಮನಾಗಲಾರ !!
ಹಿoದು ನಾಮವೊoದಿದ್ದರೆ
ಹಿoದುವಾಗಲಾರ !!
ಕೋಮುವಾದಿಗಳಿಗೆ
ಜಾತಿಯಿಲ್ಲ !!
ಉಗ್ರವಾದಿಗಳಿಗೆ
ಧರ್ಮವಿಲ್ಲ !!
ಪರ ಧರ್ಮವನ್ನು
ದ್ವೇಷಿಸುವನು
ಮನುಷ್ಯನಾಗಲಾರ !!
ಪರ ಧರ್ಮವನ್ನು
ಗೌರವಿಸುವವನು
ಕ್ರೂರನಾಗಲಾರ !!
ಜಾತಿ ಧರ್ಮ
ದೂರವಿಡೋಣ
ಮೊದಲು
ಭಾರತೀಯರಾಗೋಣ!!
ಪರ ಧರ್ಮ
ದ್ವೇಷವನ್ನು
ದೂರವಿಡೋಣ !!
ಪರ ಧರ್ಮ ಸ್ನೇಹವನ್ನು
ಎತ್ತಿ ಹಿಡಿದು
ಮುನ್ನುಗ್ಗ್ಗೋಣ !!
ಬರೆಯುವ ನಾನು
ಒಳ್ಳೆಯವನಲ್ಲ !!😜
ಓದುವ ನೀನು
ಕೆಟ್ಟವನಲ್ಲ !!😊..
ರಫ಼ಿ ರಿಪ್ಪನ್ ಪೇಟೆ
No comments: