ಜೋಗ ಜಲಪಾತವನ್ನು ನೋಡಿತು ನನ್ನ ನಯನ
ಎತ್ತರದಿಂದ ಬೀಳುತ್ತಿರುವ ಈ ಜಲಪಾತಕ್ಕೆ
ತತ್ತರಿಸಿದೆ ಅಲ್ಲಿರುವ ಕಲ್ಲು ಬಂಡೆಗಳು
ಪ್ರವಾಸಿಗರ ಮನ ಸೆಳೆಯುತ್ತಿದೆ ಜೋಗಜಲಪಾತ ಧುಮ್ಮಿಕ್ಕಿ ಆರ್ಭಟಿಸುತ್ತದೆ ಎಲ್ಲೆಲ್ಲೂ ಈ ಜಲಪಾತ
ಜೋಗ ಜಲಪಾತವನ್ನು ನೋಡಿತು ನನ್ನ ನಯನ
ಮಳೆಯಿಲ್ಲದೆ ಸುರಿಯಿತು ಹನಿ ಹನಿ ಗವನ ಇದಕ್ಕೆಲ್ಲ ಕಾರಣ ನನ್ನ ಎರಡು ನಯನ ಜಲಪಾತವ ನೋಡಿ ಜಾರುತಿದೆ ಬೆಚ್ಚಗಿನ ಹನಿಗಳು ಈ ಜಲಧಾರೆಯ ಸೌಂದರ್ಯಕ್ಕೆ ಕಾರಣ ಉಂಟೆ ಇದರ ಸೊಬಗನ್ನು ವರ್ಣಿಸಲು ಪದಗಳುಂಟೆ ಮಳೆಗಾಲದಲ್ಲಿ ಅಬ್ಬರಿಸಿದೆ ಜಲಪಾತದ ಅಲೆಗಳು ನೋಡಿದರೆ ಕುಣಿದಾಡುವ ಆಸೆ ಯಾಗುವುದು ಎಲ್ಲರ ಮನದಲ್ಲಿ ನಮ್ಮ ಕನ್ನಡ ನಾಡಿನ ಹೆಮ್ಮೆಯ ಪ್ರವಾಸಿಗರ ತಾಣ ವಿಶ್ವವಿಖ್ಯಾತ ದಲ್ಲಿ ಪ್ರಸಿದ್ಧಿಪಡೆದಿದೆ ಈ ಜಲಪಾತದ ತಾಣ ರಾಜಗಾಂಭೀರ್ಯದಲ್ಲಿ ಹರಿಯುತ್ತಿದೆ ಈ ಜಲಪಾತ ನೋಡುತ್ತಾ ನಿಂತಿರುವ ವರಿಗೆ ಆಯಿತು ಭಯದ ಸಂಭ್ರಮ ಜಲಪಾತದ ಅಲೆಗಳು ಬೀಳತೊಡಗಿದೆ ಅಲೆಗಳ ನಡುವೆ ನೀರು ಚಿಮ್ಮುತ್ತಿದೆ ನೋಡುಗರ ನಯನ ಹಾಗೂ ಮನಸ್ಸನ್ನು ಸೆಳೆಯುತ್ತಿದೆ ಪ್ರೇಮಿಗಳಿಗೆ ನಿನ್ನದೇ ಕನವರಿಕೆ ಯಾಗುತ್ತಿದೆ.....
ಶರಾವತಿಯು ನಲಿದು ಉಲಿದು ಬರುತಿಹಳು ಬಳುಕುತಾ ಒಲಿದು// ಕಲ್ಲುಗುಡ್ಡಗಳ ಮೆಲುವಾಗಿ ದಾಟುತಾ ಕಾಡ ಇಕ್ಕೆಲಗಳಲಿ ನವಿರಾಗಿ ಹರಿಯುತಾ ಕಲ್ಲು ಬೆಟ್ಟದಿಂದ ಆರ್ಭಟಿಸಿದ ದುಮುಕುತಾ ನೋಡುಗರ ಮನ ಪುಳಕಿತಗೊಳಿಸುತಾ/// ದೇಶದುನ್ನತ ಅದ್ಭುತ ಜಲಧಾರೆಯಾಗಿ ವಿದ್ಯುತ್ ಉತ್ಪಾದನೆಯ ಆಗರವಾಗಿ ಸೃಷ್ಟಿ ಸೌಂದರ್ಯದ ಖಣಿಯಾಗಿ ಮನಸೂರೆಗೊಳ್ಳುವ ಜಲಪಾತವಾಗಿ// ರಾಜ ರಾಣಿ ರೂರಲ್ ರಾಕೆಟ್ ಗಳಾಗಿ ರುದ್ರರಮಣೀಯ ನೋಟಕ್ಕೆ ಸಾಕ್ಷಿಯಾಗಿ ಕರುನಾಡ ಸಿರಿ ಸೌಂದರ್ಯ ಕನ್ಯೆಯಾಗಿ ಮಲೆನಾಡ ಮೈಸಿರಿಯ ಸುಂದರಿಯಾಗಿ// ಜಗದೆಲ್ಲೆಡೆಯಿಂದ ಕಣ್ಣುಗಳಾಕರ್ಷನದಿ ತನ್ನತ್ತ ಬರಸೆಳೆಯುತಿಹ ಧುಮುಕುವ ನದಿ ಮೆರೆಯುತಿದೆ ಧರೆಗೆ ಮೆರಗು ನೀಡಿ ನಲಿಯುತಾ ಸೊಬಗು ವೈಯಾರದಿ ಕಣ್ಮನ ತಣಿಸುತಾ
No comments: