Header Ads

Breaking News
recent

ನೀ ಎನ್ನ ಮನಗೆದ್ದ ಹುಡುಗಿ.......

 ನೀ ಎನ್ನ ಮನಗೆದ್ದ ಹುಡುಗಿ

ನೀ ನೋಡಲು ರೂಪವತಿ
ಗುಣದಲ್ಲೂ ನೀ  ಗುಣವತಿ

ಮಲೆನಾಡ  ಹೆಬ್ಬಾಗಿಲ ಕುವರಿ
ಮುಗುಳು ನಗೆ ನಿನಗಂದ ನಾರಿ

ಆ ಮೊಗದಲ್ಲಿದೆ ಹುಸಿ ಕೋಪ
ನಾ ಮಾಡುವೆ ಸದಾ ನಿನ್ನ ಜಪ

ಕನಸಲ್ಲಿ ಬಂಧು ಕಾಡುವ ಬಾಲೆ
ನೀ ಬೀಸಿದೆ ನನ್ನ ಮೇಲೆ ಪ್ರೀತಿಯ ಬಲೆ

ನಿನಗಾಗಿ ನಾನು ನನಗಾಗಿ ನೀನು
ನಮ್ಮಿಬ್ಬರ ಪ್ರೀತಿಯ ಕಂಡು ನಗುತ್ತಿದೆ ಬಾನು

ಸದಾ ಜಗಳವಾಡುವ ಜಗಳಗಂಟಿ
ನೀ ಬರುವವರಿಗೂ ನಾ ಒಬ್ಬಂಟಿ

ಮುಗ್ಧ ಮನದ ಓ ಆರತಿ
ನೀ ಎನ್ನ  ಜೀವನ ಸಂಗಾತಿ

No comments:

Powered by Blogger.