ಯಾವುದು ಶಾಶ್ವತವಲ್ಲ ಜೀವನದಲ್ಲಿ - What is not permanent in life
ಯಾವುದು ಶಾಶ್ವತವಲ್ಲ ಜೀವನದಲ್ಲಿ
ಬಾಳೆಂಬ ಬಂಡಿಯಲ್ಲಿ ನೀ ಸಾಗಿ
ಅಂತ್ಯವೆಂಬ ಸಂತೆಯಲ್ಲಿ ಸಾಗಲೇ ಬೇಕು...
ಬದುಕಿನ ಪಯಣದಲ್ಲಿ ಒಂದಿಷ್ಟು
ಸಿಹಿ ಜೊತೆಜೊತೆಗಿನ ಕಹಿ ನೆನಪುಗಳು
ನಮ್ಮವರ ಕಂಬನಿಯ ಒರೆಸಲಾಗದೆ
ಬಿಳಿ ವಸ್ತ್ರಧಾರಿಯಾಗಿ ನಮ್ಮ ಪಯಣ
ಒಳ್ಳೆಯವನು ಕೆಟ್ಟವನೆಂಬ
ಪಟ್ಟದೊಡನೆ ಚಟ್ಟದ ಮೇಲೆ ಪಯಣ
ಆಡುವ ಮಾತೆಲ್ಲವ ಮುಗಿಸಿ
ಮೌನವಾಗಿ ಚಿರನಿದ್ರೆಯಲ್ಲಿ
ಬದುಕಿನಲಿ ಸ್ವಾರ್ಥದಿಂದ ಎಲ್ಲವ
ಕೊಂಡು ಬರಿಗೈ ಪಯಣ ನಮ್ಮದು
ಬದುಕಿದ್ದಾಗ ಹೋಗಲು ಭಯ
ಪಡುವ ಸ್ಥಳದಲ್ಲೆ ನಮ್ಮ ವಾಸ
ಮಾನವನ ಬದುಕೆ ಬಹಳಷ್ಟು ವಿಚಿತ್ರ
ದರ್ಪ,ಅಹಂಕಾರದಿಂದ ಮೆರೆದು
ತಾನೇ ಎಲ್ಲವೆಂದು ಕೊನೆಗೊಂದು ದಿನ
ಪ್ರಾಣ ಪಕ್ಷಿಯ ಜೊತೆ ಮರೆಯಾಗಿ ಹೋಗುವುವು.......
No comments: