ನುಡಿಯದ ಮೌನದ ಹಾದಿಯಲ್ಲಿ
ನುಡಿಯದ ಮೌನದ ಹಾದಿಯಲ್ಲಿ
ಬರೆದ ಅಕ್ಷರದ ಮೆರವಣಿಗೆ ನಡೆಯದ ಕಾಲಿನ ದಾರಿಯಲ್ಲಿ ಹೋರಟ ಗೆಲುವಿನ ರಥ ಯಾತ್ರೆ ಕಂಡರೂ ಕಾಣದ ಕನಸೊಳಗೆ ಸಾಧಿಸುವ ಛಲ ಗಳಿಗೆ ಕೇಳಿಯೂ ಕೇಳದ ಕಿವಿಯೊಳಗೆ ಮೂಕವೇದನೆ ಮೊರೆತಂತೆ ಒಲವದು ಸುಂದರ ಕವನ ಬಯಸಿ ಬರೆದ ಹಾಡಂತೆ ಸುಂದರ ಮನಸಿನ ಕಲ್ಪನೆ ಯಶಸ್ಸು ಒಲಿದು ಬಂದಂತೆ. ಮನಸಿನ ಮರೆಯದ ಪ್ರತಿಗಳಿಗೆ ಉಸಿರು ಬಿಗಿದು ಹಿಡಿದಂತೆ ಎತ್ತಲೋ ಸಾಗಿದೆ ಜೀವನ ಖಾಲಿ ಹಾಳೆಯ ಪುಟದಂತೆ
No comments: