ಗುರಿಯು ತೋರೊ ಗುರು........
ತಂದೆ-ತಾಯಿ ಬಂಧು ಬಳಗವಾಗಿ
ಮನವ ಉಳುವ ಯೋಗಿಯಾಗಿ ಮೂಕ ಮುಗ್ಧ ಮನವ ಹದವಾಗಿಸಿ ಪ್ರೀತಿ-ನೀತಿ ನಡೆನುಡಿಯ ಗೊಬ್ಬರ ಹಾಕಿ// ಮುದದಿ ಅಕ್ಷರ ಬೀಜಗಳ ಬಿತ್ತಿ ಶಿಕ್ಷೆ ವಿದ್ಯಾಭಿಕ್ಷೆ ನೀಡೊ ಶಿಕ್ಷಕನಾಗಿ ಶಿಸ್ತು ಸಂಯಮ ಸಮತೆಗೆ ದಾರಿದೀಪವಾಗಿ ನಿಸ್ವಾರ್ಥ ತುಂಬಿದ ಜೋಗಿಯಾಗಿ// ನಾಗರಿಕ ನಿರ್ಮಾಣದ ಶಿಲ್ಪಿಯಾಗಿ ದೇಶ ದೇಳ್ಗೆಯ ರೂವಾರಿಗಳ ನಿಮಾ೯ತೃವಾಗಿ ಧಮನಿ ಧಮನಿಯಲಿ ವಿದ್ಯೆ ಬೀಜ ಮೂಳೆಸಿ ಧೀಮಂತ ನಾಯಕರ ನಿರ್ಮಿಸೋ ಕರ್ತೃವಾಗಿ// ಎಲ್ಲ ಹುದ್ದೆಗಳ ಸಂಪನ್ಮೂಲ ವ್ಯಕ್ತಿಯಾಗಿ ತಿಳಿಯದೆಲ್ಲ ವಿಷಯ ಅರುಹೊ ಧ್ವನಿಯಾಗಿ ಆತ್ಮಶುದ್ಧಿಯ ಮಾರ್ಗದರ್ಶಕನಾಗಿ ಹಿತ ಚಿಂತನಗಳ ಹೂಳುತ ಮೆಲುವಾಗಿ// ಗುರಿಯು ತೋರೊ ಗುರು ನೀನು ಗುರುತರವಾದದ್ದು ಸಾಧಿಸಲೇಣಿಯಾದ ಗುರು ಸಕಲ ವಲ್ಲಭಬಲ್ಲ ಎಲ್ಲಬಲ್ಲ ಗುರು ಸತತ ಅಭ್ಯಾಸದಲ್ಲಿ ನಿರತ ನೀಗುರು
No comments: