ನಿದಿರೆಯಂತಹ ಮರಣ
ನಿದಿರೆಯೆಂಬ ಲೋಕದಲಿ
ನಡೆಯುತ್ತಿದೆ ಹೊಸ ತಿರುವುಗಳು..
ನಡು ವಯಸ್ಸಿನ ಪಾತ್ರದೊಳಗೆ
ನಿನ್ನನ್ನೊಮ್ಮೆ ಯಾರೋ ಕರೆವರು..
ಕಣ್ತೆರೆದು ನೋಡುತ್ತಿರಲು
ಹೊಸಜಗವ ನೀ ಕಂಡಿಹೆ..
ಎಲ್ಲೋ ನೋಡಿರುವ ಆ ಜಗವು
ಹೊಸಬೆಳಕಲಿಂದು ಬೆರೆತಿಹುದು..
ಅಂದು ನೀ ಕಂಡ ಇದೇ ಭುವಿಯು
ಮಂಜಾ ಮನದಿ ಮೂಡಿಹುದು..
ನಯನಗಳೆರಡು ಮಾಡಿವೆಯೊ ಮೋಡಿ
ನವಲೋಕದಂತಿಂದು ಕಾಣುವುದು..
ಮತ್ತೆ ಮರಣ ಮತ್ತೆ ಜನುಮ
ಪ್ರತಿದಿನವು ನಡೆವುದು..
ಕನಸು ನಿಜವೋ, ಕಣ್ತೆರೆದರೆ ನಿಜವೋ
ತಿಳಿಯದೆ ಮನವು ಕೊರಗುವುದು..
ಹೊಸಲೋಕದಿಂದ ಮತ್ತೆ ಮರಣ
ನಿದಿರೆಯಲೇ ನೀ ಕಳೆವೆ..
ಮರುಜನನವು ಸಿಗುವುದೊ ನಾ ತಿಳಿಯೇ
ನಂಬಿಕೆಯೊಂದೆ ಇಲ್ಲಿ ಉಳಿದಿಹುದು ನಿನ್ನ ಪ್ರೀತಿ ಪಾತ್ರರಿಗೆ .....
✒✒✒ ರಫ಼ಿ ರಿಪ್ಪನ್ ಪೇಟೆ
No comments: