Header Ads

Breaking News
recent

#ಹುಟ್ಟುವುದೇ_ಪಾಪ_ಈ_ಜಗದಲ್ಲಿ!!

ಹುಟ್ಟುವುದು ತಪ್ಪಲ್ಲ
ಮನುಷ್ಯನಾಗಿ; 
ಆದರೆ......
ಹಿಂದುವಾಗಿ 
ಮುಸ್ಲಿಮನಾಗಿ
ಇಸಾಯಿಯಾಗಿ
ಮತ್ತೊಂದು ಧರ್ಮಿಯನಾಗಿ
ಹುಟ್ಟುವುದೇ ಪಾಪವಿಲ್ಲಿ!!

ಹುಟ್ಟುವುದು ತಪ್ಪಲ್ಲ
ಮನುಷ್ಯನಾಗಿ;
ಆದರೆ......
ಬಿಳಿಯನಾಗಿ
ಕರಿಯನಾಗಿ
ಕೆಂಪು ಮುಖದವನಾಗಿ
ಬಣ್ಣವೆ ಇಲ್ಲದವನಾಗಿ
ಹುಟ್ಟುವುದೇ ಪಾಪವಿಲ್ಲಿ!!

ಹುಟ್ಟುವುದು ತಪ್ಪಲ್ಲ
ಮನುಷ್ಯನಾಗಿ;
ಆದರೆ......
ದೀನನಾಗಿ
ದಲಿತನಾಗಿ
ಅಸ್ಪೃಶ್ಯನಾಗಿ
ಹೀನಾ ಕುಲದವನಾಗಿ
ಹುಟ್ಟುವುದೇ ಪಾಪವಿಲ್ಲಿ!!

ಹುಟ್ಟುವುದು ತಪ್ಪಲ್ಲ
ಮನುಷ್ಯನಾಗಿ;
ಆದರೆ......
ಅನಾಥನಾಗಿ
ನಿರ್ಗತಿಕನಾಗಿ
ಬಡವನಾಗಿ
ನಿಸ್ಸಹಾಯಕನಾಗಿ
ಹುಟ್ಟುವುದೇ ಪಾಪವಿಲ್ಲಿ!!

ಹುಟ್ಟುವುದು ತಪ್ಪಲ್ಲ
ಮನುಷ್ಯನಾಗಿ;
ಆದರೆ......
ಪ್ರಾಣಿಯಾಗಿ
ಪಕ್ಷಿಯಾಗಿ
ಕೀಟವಾಗಿ...


ನಿರ್ಜಿವ ಕಲ್ಲಾಗಿಯಾದರೂ
ಹುಟ್ಟದಿರುವುದೇ ಪಾಪವಿಲ್ಲಿ!!

ನಾವೆಲ್ಲಾ ಪರಮ ಪಾಪಿಗಳು!
ಹಾಗಾಗಿಯೇ ವರ ಪಡೆಯದೆ
ವಿನಾಕಾರಣ ಜನ್ಮರಾಗಿದ್ದೇವೆ;
ಪುನರಪಿ ಜನನಂ
ಪುನರಪಿ ಮರಣಂ
ಪುನರಪಿ ಜನನೀಜತರೇ ಶಯನಮ್
ಇಹ ಸಂಸಾರೆ ಬಹುದುಸ್ತಾರೇ
ಕೃಪಯಾsಪಾರೇ ಪಾಹಿ ದೇವ!!

✒✒ 

No comments:

Powered by Blogger.