ಹೋರಾಡಲಾಗದೆ_ನಿಂತುಹೋದ_ನಮ್ಮ ಅಪ್ಪುವಿನ_ಹೃದಯವೇ .....
#ಹೋರಾಡಲಾಗದೆ_ನಿಂತುಹೋದ_ನಮ್ಮ ಅಪ್ಪುವಿನ_ಹೃದಯವೇ
#ಬಡಿತ_ನಿಲ್ಲಿಸಿದ_ನಿನಗೆ_ಧಿಕ್ಕಾರ
#ನಮ್ಮ_ಅಪ್ಪು_ನಮಗೆ_ಬೇಕು
ಅಯೋ!!..ನಮ್ಮ ಅಪ್ಪುವಿನ ಹೃದಯವೇ!!!
ನೀನ್ ಇದ್ದದ್ದು ಯಾವುದೋ ಮಾಮೂಲಿ ದೇಹವಲ್ಲ ಕಣೋ!! ಈ ಗಂಧದಗುಡಿಯ ಏಕೈಕ ರಾಜ ನಮ್ಮ ಕನ್ನಡದೈವ ಅಣ್ಣಾವ್ರ ರಕ್ತದಿಂದ ಜನಿಸಿದ್ದ ಶ್ರೇಷ್ಠ ದೇಹ.
ಯಾಕೋ ನಿಂತುಬಿಟ್ಟೆ....😔
"ಅಯ್ಯೋ!! ಮನಸ್ಸು ಬಿಚ್ಚಿ ನಗ್ತಾನಲ್ಲಪ್ಪ, ಎಷ್ಟು ನಿಷ್ಕಲ್ಮಶ ನಗು" ಎಂದು ಅದೆಷ್ಟೋ ದೊಡ್ಡವರು ಹೇಳುತ್ತಿದ್ದ; ಸದಾ ನಗುಮೊಗವ ತೋರುತ್ತಿದ್ದ ದೇಹವದು.
ಯಾಕೋ ನಿಂತುಬಿಟ್ಟೆ...... 😔
ಅಪ್ಪ-ಅಮ್ಮ, ಅಜ್ಜಿ-ತಾತ ಅಕ್ಕ-ತಂಗಿಯರೊಟ್ಟಿಗೆ ಕುಳಿತು ನೀನಿದ್ದ ಆ ದೇಹವ ನೋಡಿಯೇ ಕಣೋ ನಕ್ಕು ನಲಿದು ನಾಲ್ಕು ಒಳ್ಳೆಯದನ್ನು ಚಿತ್ರಮಂದಿರದಿಂದ ಸಮಾಜವು ಪಡೆದುಕೊಳ್ಳುತಿದ್ದದ್ದು.
ಯಾಕೋ ನಿಂತುಬಿಟ್ಟೆ..... 😔
ಯಾರಿಗೂ ಎಂದಿಗೂ ಕೆಡುಕ ಬಯಸದ ಮನಸ್ಥಿತಿಯ ದೇಹವದು ಕಣೋ....
ಯಾಕೋ ನಿಂತುಬಿಟ್ಟೆ... 😔
ದಾನ ಧರ್ಮವ ಮಾಡುತ್ತಿದ್ದ ದೊಡ್ಡಮನೆಯ ದೇಹ ಕಣೋ.
ಯಾಕೋ ನಿಂತುಬಿಟ್ಟೆ...... 😔
"ಒಳ್ಳೆ ಹೃದಯವಂತ"...ಎಂದು ನಿನ್ನನ್ನೂ ಉಲ್ಲೆಖಿಸಿ ಅಪ್ಪುವನ್ನು ಹೋಗಳುತ್ತಿದ್ದರು!!!
ಕೊಂಚ ಹೊರಡಬಹುದಿತ್ತಲ್ಲೋ!!! ನಿನಗಾಗಿಯಲ್ಲದಿದ್ದರೂ ನಮಗಾಗಿ, ಕನ್ನಡಕ್ಕಾಗಿ, ಆ ಎರಡು ಹೆಣ್ಣುಮಕ್ಕಳಿಗಾಗಿ, ಅಪ್ಪುವನ್ನು ಪ್ರೀತಿಸುವ ಕೋಟ್ಯಾಂತರ ಮನಸ್ಸುಗಳಿಗಾಗಿ, ಕುಟುಂಬಕ್ಕಾಗಿ ಕೊನೆಯದಾಗಿ ಆ ಮೊಗದ ನಿಷ್ಕಲ್ಮಷ ನಗುವಿಗಾಗಿಯಾದರು ನೀ ನಿಲ್ಲಬಹುದಿತ್ತು..
ಓ ಅಪ್ಪುವಿನ ಹೃದಯವೇ..!!
ಅಪ್ಪುವಿನ ನಗು ಕಂಡಾಗ ನಿನ್ನ ಪ್ರೀತಿಸಿದ್ದ ನಾನು!!! ಅಪ್ಪುವಿನ ಇಂದಿನ ಮೌನವ ಕಂಡು ನಿನ್ನ ದ್ವೇಷಿಸುತ್ತೇನೆ..ಧಿಕ್ಕಾರ ನಿನಗೆ...😔
ನೀ ಸೋತು ನಿಂತುಬಿಟ್ಟೆ!!
ಅಪ್ಪು ತನ್ಮಯತೆಯಿಂದ ಮಲಗಿಹರು....!!
ನಾವು............?
ಬೇಸರದಿಂದ,,,,
No comments: