ಎಲ್ಲರಂತಲ್ಲ ನನ್ನ ಚಿಕ್ಕಪ್ಪ, ಎಲ್ಲರಂತಲ್ಲ ಡಾ.ಅರ್ ಎ ಅಬೂಬಕರ್ : ಅವರೇ ಭಿನ್ನ
ರಿಪ್ಪನ್ ಪೇಟೆಯ ಜನತೆಗೆ ಅತ್ಯಂತ ಚಿರಪರಿಚಿತ ವ್ಯಕ್ತಿ, ಸದಾ ನಗುಮೊಗದ ವ್ಯಕ್ತಿತ್ವದ ಡಾ.ಅಬೂಬಕರ್ ಒಂದು ಜ್ಞಾನ ಭಂಡಾರವೇ ಆಗಿದ್ದರು.ಅವರ ಕುರಿತು ಎಲ್ಲರಿಗೂ ಬಾಯಿತುಂಬಾ ಹೇಳಲಿಕ್ಕಿದೆ.ಒಬ್ಬ ನಿಷ್ಕಳಂಕ ವ್ಯಕ್ತಿ,ಮಾದರಿಯುತ ಪುರುಷ. ಅವರ ಅಗಲಿಕೆ ನಮ್ಮನ್ನು ಆಳವಾದ ದುಃಖದ ಮಡುವಿನಲ್ಲಿ ಬೀಳಿಸಿದೆ.ಅವರು ಬಿಟ್ಟು ಹೋದ ಜಾಗವನ್ನು ತುಂಬಲು ಕಷ್ಟಸಾದ್ಯವೆಂದೇ ಬಾಸವಾಗುತ್ತಿದೆ.ಕಾರಣ ಅವರು ಅಷ್ಟೊಂದು ಸಕ್ರಿಯರಾಗಿದ್ದರು.ತುಂಬಲಾರದ ನಷ್ಟವೆಂದು ಕೇವಲ ಬಾಯಿಮಾತು ಅಲ್ಲ.ಅಕ್ಷರಶಃ ನಿಜವಾದ ಪ್ರಸಂಗ!
ಯಾವಗಲೂ ಶ್ವೇತ ವರ್ಣದ ಬಟ್ಟೆಯಲ್ಲಿ ರಾರಾಜಿಸುತ್ತಿದ್ದ ಅವರು ಎಂದಿಗೂ ಯಾರೊಂದಿಗು ಸಿಟ್ಟಿನಿಂದ ಮಾತನಾಡದ ವ್ಯಕ್ತಿತ್ವ ಅವರದು. ಯಾವುದೇ ವಿಷಯವಾದರೂ ತುಂಬಾ ಆಳವಾಗಿ ಯೋಚಿಸಿ ನಿರ್ಧಾರ ಕೈಗೊಳ್ಳುತ್ತಿದ್ದರು.ಅವರ ಬಳಿ ಎಂತಹ ಜಟೀಲ ಸಮಸ್ಯೆ ತೆಗೆದುಕೊಂಡು ಹೋದರು ತುಂಬಾ ಜಾಣ್ಮೆಯಿಂದ ಪರಿಹರಿಸುತ್ತಿದ್ದರು.
ಧಾರ್ಮಿಕ ಕ್ಷೇತ್ರವಲ್ಲದೇ ರಾಜಕೀಯ ಕ್ಷೇತ್ರದಲ್ಲೂ ಅವರ ಕಾರ್ಯ ವೈಖರಿ ಅವರ ವಿರೋಧಿಗಳಿಗೂ ಕೂಡ ಒಮ್ಮೊಮ್ಮೆ ಆಶ್ಚರ್ಯಕರವಾಗಿ ಕಾಣಿಸುತಿತ್ತು.ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡು ರಾಜ್ಯ ಮಟ್ಟದ ನಾಯಕರ ಒಡನಾಟವನ್ನು ಇಟ್ಟುಕೊಂಡಿದ್ದ ಅವರು ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತರ ರಾಜ್ಯ ಘಟಕದ ಕಾರ್ಯದರ್ಶಿಯಾಗಿಯು ಕಾರ್ಯ ನಿರ್ವಹಿಸಿದ್ದರು.ಪ್ರಸ್ತುತ ರಿಪ್ಪನ್ ಪೇಟೆ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿದ್ದರು.ಅವರ ಅಗಲಿಕೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಉಂಟಾಗಿರುವ ನಷ್ಟವನ್ನು ಅಲ್ಲಗೆಳೆಯುವಂತಿಲ್ಲ.
ರಿಪ್ಪನ್ ಪೇಟೆಯ ಸಮಾಜ ಸೇವೆಯ ಸಂಸ್ಥೆ ರೋಟರಿ ಕ್ಲಬ್ ನಲ್ಲಿಯೂ ಕೂಡ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿ ಅನೇಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರು.
ಶಿವಮೊಗ್ಗ ಜಿಲ್ಲಾ ವಕ್ಫ ಬೋರ್ಡ್ ಉಪಾಧ್ಯಕ್ಷರಾಗಿ ಜಿಲ್ಲೆಯ ಹಲವಾರು ಮಸೀದಿಯ ಅಭಿವೃದ್ಧಿಗ್ಗೆ ಕಾರಣಿಕರ್ತರಾಗಿದ್ದರು.ಜಿಲ್ಲೆಯ ಎಲ್ಲಾ ಮಸೀದಿಗಳ ಗುರುಗಳಿಗೆ ಅವರು ಪ್ರೀತಿ ಪಾತ್ರರಾಗಿದ್ದರು.
ರಿಪ್ಪನ್ ಪೇಟೆಯ ಮೊಹಿಯುದ್ದೀನ್ ಜುಮ್ಮಾ ಮಸೀದಿಯ ಅಧ್ಯಕ್ಷರಾಗಿದ್ದ ಅವರು ಅವರ ಅಧಿಕಾರವದಿಯಲ್ಲಿ ಮಸೀದಿಯ ಚಿತ್ರಣವನ್ನೆ ಬದಲಾಯಿಸಿದ್ದರು.
ಅದೇ ದೀನೀ ಚಟುವಟಿಕೆ ಮಾಡುತ್ತಾ ಒಬ್ಬರು ಮರಣ ಹೊಂದುತ್ತಾರೆಂದರೆ ಅವರೆಷ್ಟು ಭಾಗ್ಯವಂತರು ನೀವೇ ಊಹಿಸಿನೋಡಿ..ದುನಿಯಾದ ಸ್ವರ್ಗೋದ್ಯಾಯನದಿಂದ ಆಖಿರತಿನ ಶಾಶ್ವತ ಸ್ವರ್ಗಕ್ಕಿರುವ ಅವರ ಪಯಣದ ಹಿಂದೆ ಸಮರ್ಪಣೆ ಇದೆ.
ಹೌದು...
ಅಬೂಬಕರ್ ಸಾಬ್ ಎಂದು ಕರೆಯಲ್ಪಡುತ್ತಿದ್ದ ಡಾ.ಅರ್ ಎ ಅಬೂಬಕರ್ ತನ್ನ ಬದುಕನ್ನು ಸುನ್ನತ್ ಜಮಾತಿಗಾಗಿ ಮೀಸಲಿಟ್ಟ ವ್ಯಕ್ತಿಯಾಗಿದ್ದರು.ಅತ್ಯಂತ ವಿನಯದ ಸರಳ ಸಜ್ಜನಿಕೆಯ ಅಬೂಬಕರ್ ರವರಿಗೆ ಸುನ್ನತ್ ಜಮಾತ್ ಎಂದರೆ ಪಂಚಪ್ರಾಣ.ತನ್ನ ಬದುಕಿನ ಸಿಂಹಪಾಲು ಸುನ್ನತ್ ಜಮಾತಿನ ಬೆಳವಣಿಗೆಗೆ ಮೀಸಲಿಟ್ಟ ' ಮುವಫ್ಫಕ್'(ಅನುಗ್ರಹೀತ) ವ್ಯಕ್ತಿಯಾಗಿದ್ದರು.
ಪ್ರತಿಯೊಬ್ಬ ಸುನ್ನೀ ಕಾರ್ಯಕರ್ತರು ದಿನಾಲು ಅಲ್ಲಾಹನಲ್ಲಿ ಬೇಡುತ್ತಿರುವ ಮರಣ!ತಾನು ಯಾವ ಪ್ರಸ್ಥಾನದ ಉನ್ನತಿಗಾಗಿ ಬದುಕಿನುದ್ದಕ್ಕೂ ಓಡಾಡಿ ಬಸವಳಿದು ಬೆಂಡಾದರೂ ಕುಗ್ಗದೆ ಆತ್ಮಸ್ಥೈರ್ಯ ಕೈಬಿಡದೆ ಮತ್ತೂ ದೂರ ಕ್ರಮಿಸುತ್ತಲೇ ಇರುವಾಗ ಅದೇ ಓಟದಲ್ಲಿ (ಫೀ ಸಬೀಲಲ್ಲಿ) ಮರಣ ಹೊಂದಿದರು.
ಅಲ್ಲಾಹು ಅವರೊಂದಿಗೆ ನಮ್ಮನ್ನು ಕೂಡಾ ಜನ್ನಾತುಲ್ ಫಿರ್ದೌಸಿನಲ್ಲಿ ಸೇರಿಸಲಿ.
ಅಬೂಬಕರ್ ರವರು ರಿಪ್ಪನ್ ಪೇಟೆಯ ಮೊಹಿಯುದ್ದೀನ್ ಜುಮ್ಮಾ ಮಸೀದಿಯ ಅಧ್ಯಕ್ಷರಾಗಿ,ವಕ್ಫ ಬೋರ್ಡ್ ಉಪಾಧ್ಯಕ್ಷರಾಗಿ ಭಾರೀ ಸಾಧನೆಗೈದ ವ್ಯಕ್ತಿಯಾಗಿದ್ದಾರೆ. ಅವರ ಖಬರ್ ನ್ನು ಅಲ್ಲಾಹು ಪ್ರಕಾಶಿಸಲಿ.ಅವರ ಪರಲೋಕ ಬದುಕು ವಿಜಯಕರವಾಗಲಿ,ನಮ್ಮನ್ನು ಅವರ ಜೊತೆ ಅಲ್ಲಾಹನು ಸ್ವರ್ಗೋದ್ಯಾಯನದಲ್ಲಿ ಒಟ್ಟು ಸೇರಿಸಲಿ.
ನನಗೆ ಅವರೊಂದಿಗೆ ಅತ್ಯಂತ ಹತ್ತಿರದ ಒಡನಾಟವಿತ್ತು.ಅವರು ನನ್ನ ಚಿಕ್ಕಪ್ಪನಾಗಿರದೆ ನನಗೊಬ್ಬ ಆತ್ಮೀಯ ಸ್ನೇಹಿತನಾಗಿದ್ದರು.ಅವರಿಂದ ಜೀವನ ಎಲ್ಲಾ ಪಟ್ಟುಗಳನ್ನು,ಆಯಾಮಗಳನ್ನು ಕಲಿತಿದ್ದೇನೆ.ಎಂತಹ ಸಂಧರ್ಭದಲ್ಲಿಯೂ ಧನಾತ್ಮಕವಾಗಿ ಚಿಂತಿಸುವುದನ್ನು ಅವರಿಂದ ಕಲಿತಿದ್ದೇನೆ.
ಅವರ ಅಗಲಿಕೆಯಿಂದ ನಾನು ಒಬ್ಬ ಉತ್ತಮ ಸ್ನೇಹಿತ,ಗುರು,ಹಿತೈಶಿ,ನಾಯಕನನ್ನು ಕಳೆದುಕೊಂಡಿದ್ದೇನೆ.
ನಮ್ಮ ದೃಷ್ಟಿಯಿಂದ ಅವರು ಕಾಣೆಯಾಗಿರಬಹುದು ಆದರೆ ನಮ್ಮ ಹೃದಯದಿಂದಲ್ಲ....
ಎಲ್ಲರಂತಲ್ಲ ನನ್ನ ಚಿಕ್ಕಪ್ಪ, ಎಲ್ಲರಂತಲ್ಲ ಡಾ.ಅರ್ ಎ ಅಬೂಬಕರ್ ಅವರೇ ಭಿನ್ನ ....,
ಸದಾ ನಿಮ್ಮ ನೆನಪಿನಲ್ಲಿ : ರಫ಼ಿ ರಿಪ್ಪನ್ ಪೇಟೆ
No comments: